``ಮೂನ್ ವೈಟ್`` ಅಂತಾರಾಷ್ಟ್ರೀಯ ಚಿತ್ರೋತ್ಸವ: ಸುಧೀರ್ ಅತ್ತಾವರ್ ಅತ್ಯುತ್ತಮ ನಿರ್ದೇಶಕI ಮ್ರತ್ಯೋರ್ಮ ಅತ್ಯುತ್ತಮ ಚಿತ್ರ ಸೇರಿ 4 ಪ್ರಶಸ್ತಿಗಳು.
Posted date: 27 Mon, Nov 2023 03:57:42 PM
ಮುಂಬಾಯಿಯಲ್ಲಿ ಭಜನ್ ಸಾಮ್ರಾಟ್  ಅನೂಪ್ ಜಲೋಟ ಪ್ರಸ್ತುತಿಯ,ಐನಾಕ್ಸ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಕತ್ವದ" ಮೂನ್ ವೈಟ್" ಅಂತಾರಾಷ್ಟ್ರೀಯ ಚಿತ್ರೋತ್ಸವದ ನಿನ್ನೆ ನಡೆದ  ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಸುಧೀರ್ ಅತ್ತಾವರ್ ನಿರ್ದೇಶನದ   "ಮ್ರತ್ಯೋರ್ಮ" ಕನ್ನಡ ಚಿತ್ರವು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸೇರಿ 4 ಪ್ರಶಸ್ತಿಗಳನ್ನು ಬಾಚಿಕೊಂಡಿದೆ."ಅತ್ಯುತ್ತಮ ಚಿತ್ರ" ನಿರ್ಮಾಪಕ ತ್ರಿವಿಕ್ರಮ ಸಪಲ್ಯ,ಅತ್ಯುತ್ತಮ
 ನಟಿ" ಸ್ಮಿತ(ನಿವೇದಿತ),  ಅತ್ಯುತ್ತಮ ಹಿನ್ನೆಲೆ ಹಾಡು ಸಾಧನ ಸರ್ಗಂ ಇದೇ ಚಿತ್ರಕ್ಕಾಗಿ ಪ್ರಶಸ್ತಿಗಳನ್ನು ಪಡೆದುಕೊಂಡರು.
ರಾಕೇಶ್ ಅಡಿಗ ಅತ್ಯುತ್ತಮ ನಟ ನೋಮಿನೇಟ್ ಆಗಿದ್ದರು. 

ಮಹಾರಾಷ್ಟ್ರ ಗವರ್ನರ್ ರಮೇಶ್ ಬಯಾಸ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗೂ  ನೀಡಿ ಬಾಲಿವುಡ್ ನ ಖ್ಯಾತ ಲಿರಿಸಿಸ್ಟ್ ಸಮೀರ್ ರಿಗೆ ಜೀವಮಾನ ಸಾಧನ ಪ್ರಶಸ್ತಿ ನೀಡಿ ಗೌರವಿಸಿದರು.

ಚಿತ್ರವು ಒಟ್ಟು 5 ವಿಭಾಗಗಳಲ್ಲಿ ಪ್ರಶಸ್ತಿಗಾಗಿ ನಾಮಿನೇಟ್ ಆಗಿತ್ತು. .
 ಪ್ರಪಂಚದಾದ್ಯಂತದ ಸುಮಾರು 110 ಚಿತ್ರಗಳು ಉತ್ಸವದಲ್ಲಿ ಪಾಲ್ಗೊಂಡಿತ್ತು.
ಪ್ರಶಸ್ತಿ ವಿಭಾಗಕ್ಕೆ ಅಮೇರಿಕಾದ ಔಟ್ ಆಫ್ ದ ಸ್ಟೇಟ್- ಎ ಗೋಥಿಕ್ ರೊಮ್ಯಾನ್ಸ್, ,ವುಮನ್ ಇನ್ ದ ಮೇಸ್, ಚಿಲಿದೇಶದ "ಅಲ್ಮಾ", ಸ್ಪೈನ ನ "ಡಿಗ್ನಿ ಡ್ಯಾಡ್",ಲಿಥುವಾನಿಯಾದ  "ಪುರ್ಗ" , ಹಾಂಕಾಂಗ್ ದೇಶದ "ಗ್ರಾಜ್ಯುಯೇಷನ್",  ಥೈಲ್ಯಾಂಡ್ ನ....., ಭಾರತದ ಟಿಟು ಅಂಬಾನಿ, ಓಗೋ ಬಿದೇಶಿನಿ, ಮೊದಲಾದ ಚಿತ್ರಗಳು ಪ್ರಶಸ್ತಿಗಾಗಿ ಸೆಣಸಿತ್ತು.
 
 ಭಜನ್ ಸಾಮ್ರಾಟ್
ಅನೂಪ್ ಜಲೋಟ ,ಅಂಜನ್ ಶ್ರೀವಾತ್ಸವ್ ಗುಫಿ ಪೈಂಟಲ್, ಅರುಣ್ ಗೋವಿಲ್, ಖ್ಯಾತ ಗಾಯಕಿ ಡಾ ಜಸ್ಪಿಂದರ್  ನರೂಲ ಜ್ಯೂರಿಗಳಾಗಿದ್ದರು.

"ಮ್ರತ್ಯೋರ್ಮ" ಚಿತ್ರ ಈಗಾಗಲೇ ಮ್ಯಾಂಚೆಸ್ಟರ್  ಮತ್ತು ಕೆನ್ಯಾ ದೇಶದ ಅಂತರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆ ಯಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed